Friday, 1 January 2010

ನಿನ್ನೊಲವು ಕಡಲಿನಂತಹದು


ಹನಿಯಾಗಿ ಬಿದ್ದಿದ್ದೆ
ನಿನ್ನೆದೆಯ ಚಿಪ್ಪಿನಲಿ
ಒಡಲೊಳಗೆ ಬಚ್ಚಿಟ್ಟು ಮುತ್ತಾಗಿಸಿ
ಮುದ್ದುಗರೆದೆ ನೀನು.

ಮುತ್ತಾದದ್ದು ನಾನಲ್ಲ, ನಿನ್ನೊಲವು
ನೀನೊಲವ ಸುರಿಯದಿದ್ದರೆ
ಹನಿಯಾಗಿಯೇ ಇಂಗುತ್ತಿದ್ದೆ ನಾನು

ತಪ್ಪರಿತ ಮಗುವಿನಂತೀಗ
ನಿನ್ನೆದೆಯ ತಬ್ಬಿ  ಬಿಕ್ಕುವಾಸೆ 

ಬಿಕ್ಕಿ  ನಿನ್ನೊಡಲ ನೆನೆಸುವಾಸೆ

ನೆನೆದೊಡಲ ಒಳಗಿಂದ
ಉಕ್ಕುವುದು ನಿನ್ನೊಲವು
ಉಕ್ಕುತಿಹ ನಿನ್ನೊಲವ
ಬೊಗಸೆಯಲಿ ಮೊಗೆವಾಸೆ
ಮೊಗೆ ಮೊಗೆದು ಕುಡಿವಾಸೆ

ಪುಟ್ಟ ಬೊಗಸೆ ನನ್ನದು
ನಿನ್ನೊಲವು ಕಡಲಿನಂತಹದು
ಕಡಲೆಲ್ಲ ನಿನ್ನದು
ಅಲೆಯಾಗಿ ಬಳಿಬಂದು
ಪ್ರೇಮಿಸುವೆಯಾ?

5 comments:

ದಿನಕರ ಮೊಗೇರ said...

ಜ್ಯೋತಿ ಮೇಡಂ,
ಒಡಲಲ್ಲಿ ಉಕ್ಕುವ ಪ್ರೇಮದ ಅನುಭೂತಿಯನ್ನ ಚಿತ್ರಿಸಿರುವ ಕವನ ತುಂಬಾ ಸುಂದರವಾಗಿದೆ...... ಕಾಯುತ್ತಿರುವ ಚಿಪ್ಪಿಗೆ ಅಲೆಯಾಗಿ ಬಳಿ ಬಂದು ಪ್ರೇಮಿಸಿ ಮುತ್ತಾಗಿಸುತ್ತದೆ..... ಕಾಯುತ್ತಿರಿ...... ಸುಂದರ ಕವನಕ್ಕೆಅಭಿನಂದನೆಗಳು............

ಜಿ.ಎಸ್.ಬಿ. ಅಗ್ನಿಹೋತ್ರಿ said...

tumba chennagide. agaaga bareyuttiri. munduvarisi.

ಆನಂದ said...

Its very nice :)

Happy new year

ಸಾಗರದಾಚೆಯ ಇಂಚರ said...

Jyothi
nicely written

Jyoti Hebbar said...

Thank u so much