ಆ ನದಿಯ ದಂಡೆಯಾದರೂ
ಈ ತೀರದ ಬಂಡೆಯಾದರೂ
ನೀನೆಲ್ಲಿರುವೆಯೆಂದು ಗೊತ್ತಿಲ್ಲದಿರುವಾಗ...
ಮನವ ಹೊತ್ತೊಯ್ಯಲ್ಲಿ
ಅಪ್ಪಳಿಸಿದ ಅಲೆಗಳಿಂದು
ಗುರಿಯೇ ಇಲ್ಲದಿರುವಾಗ
ನಾವಿಕನೇಕೆ? ನೌಕೆಯೇಕೆ?
ಹೋಗಿ ಸೇರಲಿ ಎಲ್ಲಾದರೂ
ಮನಸು ಮೈಮರೆಯುವಲ್ಲಿಗೆ
ಬಯಕೆಗಳ ಭಾರಕ್ಕೆ
ಬೆನ್ನು ಬಾಗಿರುವಾಗ
ಪಯಣ ಮಾಡಬೇಕೆ
ಬವಣೆಗಳ ಇನ್ನೊಂದು ತೀರಕ್ಕೆ?
ಬವಣೆಗಳ ಇನ್ನೊಂದು ತೀರಕ್ಕೆ?
ನಿನ್ನ ಇರುವಿಕೆಯ ಸುಳಿವಿಲ್ಲ
ನನ್ನೊಳಗೆ 'ನಾನು' ತುಂಬಿರುವಾಗ
ಬರುವಿಕೆಯ ಕಾಯುತಿರುವೆನೆಂದು
ಹೇಳಿರುವುದು ಸುಳ್ಳಾಗಿರುವಾಗ
ನೀ ಬರುವ ಸೂಚನೆಯೂ ಇಲ್ಲ
ಆದರೂ ಕಾಯಲೇನು?
ಕ್ಷಮಿಸಲಾದರೂ ಒಮ್ಮೆ ಬರುವೆಯೇನು?
ಕರುಣೆಯಿಂದಾದರೂ..
ಪ್ರೀತಿಯಿಂದಾದರೂ...
ಭಿಕ್ಷೆಯೆಂದಾದರೂ...
ದಾನವೆಂದಾದರೂ..
ಹೇಗಾದರೂ ಸರಿ...
ಒಂದು ಹಿಡಿ ಪ್ರೀತಿಯ
ಕೊಡುವೆಯೇನು?
ಹೇಳು, ಹೇಳು,
ನಾ ಕಾಯಲೇನು?
20 comments:
ಉಳಿಯದಿರಲಿ ಹೆಜ್ಜೆ ಗುರುತು
ಹಿಂಬಾಲಿಸದಿರಲಿ ನೆರಳು...
ನಿಮ್ಮ blog title ತುಂಬಾ ಚೆನ್ನಾಗಿದೆ.
ಕವನ ಹಿಡಿಸಿತು :-)
ಚೆಂದದ ಕವನ!
ದೊರಕೀತೇನೋ? ಎಂದು ಕನಸ ಅರಸುತ್ತಾ, ಸಿಕ್ಕಲ್ಲೆಲ್ಲಾ ತಿರುಗುವ ಬದುಕಿನ ಕಟೋರ ವಾಸ್ತವ ದೊರಕ್ಕಿದ್ದು. ಬೇಡಿದ್ದೆ ದೊರಕೀತೆ? ದೊರಕಬೇಕಾದದ್ದು ದೊರಕಿತೆ? ಒಟ್ಟಿಗೆ ಏನೋ ಒಂದು ದೊರಕಿತೆ?
ಎಲ್ಲ ಆಯಾಮಗಳ ನಡುವೆ ಒಂದು ಹಿಡಿ ಪ್ರೀತಿಯ ತವಕ ಜೀವನವೆಲ್ಲಾ ಕಾಯಿಸುತ್ತೆ ಅಲ್ಲವಾ....
'ಗುರಿಯೇಇಲ್ಲದಿರುವಾಗ,ನಾವಿಕನೇಕೆ?ನೌಕೆಯೇಕೆ?'.ಚೆಂದದ ಸಾಲುಗಳು.ಒಳ್ಳೆಯ ಕವನ.
"ಬಯಕೆಗಳ ಭಾರಕ್ಕೆ
ಬೆನ್ನು ಬಾಗಿರುವಾಗ
ಪಯಣ ಮಾಡಬೇಕೆ
ಬವಣೆಗಳ ಇನ್ನೊಂದು ತೀರಕ್ಕೆ?" beautiful lines.
ಕವನದ ಎಲ್ಲ ಸಾಲುಗಳು ತುಂಬಾ ಚೆನ್ನಾಗಿವೆ
ಭಾವದ ಬುಗ್ಗೆಯೋಡೆತ್ತೆ . ಖುಷಿಯಾಯಿತು
ಬಯಕೆಯ ಭಾರಕ್ಕೆ ಬೆನ್ನು ಬಾಗುವ ಕಲ್ಪನೆ ಬಹಳ ಚೆನ್ನಾಗಿದೆ.. ಭಾವನೆ ಚೆನ್ನಾಗಿ ವ್ಯಕ್ತವಾಗಿದೆ! ಸುಂದರ ಕವಿತೆ.
ಜ್ಯೋತಿ...
ಚೆಂದದ ಕವನ..
"ನಿನ್ನ ಇರುವಿಕೆಯ ಸುಳಿವಿಲ್ಲ
ನನ್ನೊಳಗೆ 'ನಾನು' ತುಂಬಿರುವಾಗ"
ತುಂಬಾ ಇಷ್ಟವಾಯ್ತು ಈ ಸಾಲುಗಳು..
ಬಯಕೆಗಳ ಭಾರಕ್ಕೆ
ಬೆನ್ನು ಬಾಗಿರುವಾಗ
ಪಯಣ ಮಾಡಬೇಕೆ
ಬವಣೆಗಳ ಇನ್ನೊಂದು ತೀರಕ್ಕೆ?
hmmm nice line....kavana channagidae:)
ಕವನ ತು೦ಬಾ ಮೆಚ್ಚುಗೆ ಆಯಿತು ಜ್ಯೋತಿ."ನಿನ್ನ ಇರುವಿಕೆಯ ಸುಳಿವಿಲ್ಲ ನನ್ನೊಳಗೆ.. 'ನಾನು' ತುಂಬಿರುವಾಗ.. ಬರುವಿಕೆಯ ಕಾಯುತಿರುವೆನೆಂದು ಹೇಳಿರುವುದು ಸುಳ್ಳಾಗಿರುವಾಗ... ನೀ ಬರುವ ಸೂಚನೆಯೂ ಇಲ್ಲ" ತು೦ಬಾ ಅರ್ಥಪೂರ್ಣವೆನಿಸಿತು.ವಾಸ್ತವಿಕತೆಯಲ್ಲಿ ಎಲ್ಲರೂ ಮುಖವಾಡವನ್ನು ಧರಿಸಿಯೇ ಇರುತ್ತಾರೆ. "ನಾನು" ಎ೦ಬುದು ಬಿಟ್ಟಿದ್ದೇನೆ ಅನ್ನುವುದು ಮಿಥ್ಯವಾದ ಮಾತು ಅನಿಸುತ್ತದೆ.
ಶುಭಾಶಯಗಳು
ಅನ೦ತ್
ಚೆಂದದ ಕವನ
ಹೀಗೆಯೇ ಬರೆಯುತ್ತಿರಿ
tumba chennagide kanri...
keep writing..... :)
ಚಂದದ ಕವನ...........
ಪದಗಳ ಜೋಡಣೆ ಚನ್ನಾಗಿತ್ತು.............
ಪದಗಳು..ಭಾವಗಳು ಸೊಗಸಾಗಿವೆ... !
very nice poem !
kavana oodidre...preeti ilde iddaru preeti huttuvantide.... chenaagide pada jodane..!!! I liked it...!!!
Tumba Chennagiddu Jyoti.... I liked it so much... Arthapoorna vada kavana....
super kavana haage blog name matte aa hejjeya foto
Nice Poem, Infact good effort! Thanks
ಆದರೂ ಕಾಯಲೇನು?
ಕ್ಷಮಿಸಲಾದರೂ ಒಮ್ಮೆ ಬರುವೆಯೇನು?
ಕರುಣೆಯಿಂದಾದರೂ..
ಪ್ರೀತಿಯಿಂದಾದರೂ...
ಭಿಕ್ಷೆಯೆಂದಾದರೂ...
ದಾನವೆಂದಾದರೂ..
--
ಈ ಸಾಲುಗಳು ನನ್ನ ಮನದಲ್ಲಿ ಏನೋ ಸಂಕಟ ತಳಮಳ ಉಂಟುಮಾಡಿದೆ....
ಚೆಂದದ ಕವನ..
ಹಾಗೆ ಭೇಟಿ ಕೊಡಿ..
www.pennupaper.blogspot.com
ಚೆನ್ನಾಗಿದೆ, ಐದನೇ ಪ್ಯಾರಾ ಹೆಚ್ಚು ಇಷ್ಟವಾಯಿತು :)
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
chenda kavana,ishta aatu
Post a Comment