ಬದುಕಿನೆಡೆಗೊಂದಿಷ್ಟು ಪ್ರೀತಿ,
ರಾಶಿ ಕುತೂಹಲ, ಅಚ್ಚರಿ
ಎದೆಯೊಳೆಲ್ಲವ ಮುಚ್ಚಿಟ್ಟುಕೊಂಡು
ಪಿಳಿ ಪಿಳಿ ಎಂದು ಕಣ್ಣು ಬಿಟ್ಟಾಗಿನ ಪರಿ
ಯಾರೋ ಎತ್ತಿಕೊಂಡು
ಪ್ರೀತಿಯಿಂದ ಎದೆಗೊತ್ತಿಕೊಂಡು
ಕಣ್ಣಿಂದ ಪನ್ನೀರು ಸುರಿಸಿ
ಎದೆಯಿಂದ ಅಮೃತವ ಉಣಿಸಿ
ನೋಡನೋಡುತ್ತಿದ್ದಂತೆ
ಕಾಲ್ಗೆಜ್ಜೆ ಘಲ್ಲೆಂದು
ಯಾರದೋ ಹೃದಯದ ಪಿಸುಮಾತಿಗೆ
ಎದೆ ಝಾಲ್ಲೆಂದದ್ದೂ ಆಯಿತು..
ನನ್ನಷ್ಟಕ್ಕೆ ನಾನಿದ್ದೆ,
ಪುಟ್ಟ ಹುಡುಗಿ ನಾನು ಎಂದುಕೊಂಡಿದ್ದೆ
ನಾಳೆ ನಾಳೆ ಮದುವೆಯಂತೆ..
ನಿಶ್ಚಯಿಸಿದ್ದೂ ಆಯಿತು.
ಹೊಸ ಕನಸುಗಳು ಅರಳಿ
ನನ್ನವನ ಸ್ವಾಗತಿಸುವವಂತೆ
ನನ್ನ ನಾಳೆಗಳೆಲ್ಲ ಇನ್ನು
ನನ್ನಿನಿಯನಿಗಂತೆ...
ನನ್ನ ಗೆಳೆಯ ವಿನಾಯಕನೊಂದಿಗೆ ಡಿಸೆಂಬರ್ ೨೦ಕ್ಕೆ ನನ್ನ ನಿಶ್ಚಿತಾರ್ಥವಾಯಿತು. ನಿಮ್ಮೆಲ್ಲರ ಹಾರೈಕೆಗಳನ್ನು ಬಯಸಿ ಈ ಕವನವನ್ನು ನಿಮ್ಮ ಮುಂದಿಡುತ್ತಿದ್ದೇನೆ..
13 comments:
ಹಾರ್ದಿಕ ಶುಭಾಶಯಗಳು
ಕನಸು ನನಸಾಗಲಿ, ಬಾಳು ಹಸನಾಗಲಿ
good one.....
happy married life:)
ಅಭಿನಂದನೆಗಳು ಜ್ಯೋತಿ.... ನಿಮ್ಮ ಮುಂದಿನ ಜೀವನ ಸುಖಕರವಾಗಿರಲೆಂದು ಹಾರೈಸುವೆ... ಚಂದದ ಕವನಕ್ಕೆ ಧನ್ಯವಾದಗಳು :)
ಅಭಿನಂದನೆಗಳು ಜ್ಯೋತಿಯವರೆ..........
ನಿಮ್ಮ ದಾಂಪಂತ್ಯ ಜೀವನ ಸುಂದರವಾಗಿರಲಿ...........
ಸಿಹಿ ಸುದ್ಧಿ ,ನಿಮ್ಮ ವೈವಾಹಿಕ ಜೀವನಕ್ಕೆ ಶುಭ ಕಾಮನೆಗಳು .ನೂತನ ಜೋಡಿಗೆ ಶುಭಾಶಯಗಳು .
ಆತ್ಮೀಯ ಶುಭಾಶಯಗಳು ಜ್ಯೋತಿ :) ನಿಮ್ಮ ಬದುಕು ಸುಂದರವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ :)Nice poem :)
ಶುಭಾಶಯಗಳು ಜ್ಯೋತಿ ಅವರೇ...ನಿಮ್ಮ ನಾಳಿನ ಕನಸೆಲ್ಲವೂ ನನಸಾಗಲಿ..
nimma ella nalegalu nimminiyanondige hasanaagali.. congrats :)
ಶುಭ ಹಾರೈಕೆಗಳು; ಬದುಕಿನ ಹೊಸ ಹೆಜ್ಜೆಗಳಿಗೆ. ಬರವಣೆಗೆ ಹೀಗೆ ಸಾಗಲಿ. ಎಂದೂ ಉಳಿಯಲಿ ಹೆಜ್ಜೆ ಗುರುತು!.
jyoti yavare,sundaravaada kavana.vaivaahika jeevanakke kaaliduttiruva nima baalu hasiraagirali, abhinandanegalu.mattu shubha haaraikegalu.
ಶುಭಾಶಯಗಳು ಜ್ಯೋತಿ ಅವರೇ...ನಿಮ್ಮ ನಾಳಿನ ಕನಸೆಲ್ಲವೂ ನನಸಾಗಲಿ..ಬಾಳು ಹಸನಾಗಲಿ
ಚಂದದ ಕವನಕ್ಕೆ ಧನ್ಯವಾದಗಳು :)
ummm.... spurty! strong aagiruva rahasya tiliyitu!
Thanks alot...
Post a Comment