ನೀನು ಕಳೆದು ಹೋಗುವ
ಭಯವಿಲ್ಲದಿದ್ದರೂ,
ನೀನು ನನಗಂಟಿಕೊಂಡೇ ಇರಬೇಕೆಂಬ
ದುರಾಸೆಯಿಲ್ಲದಿದ್ದರೂ....
ನಿನ್ನ ಮನ ಸೆಳೆಯುವ
ಅಗತ್ಯವಿಲ್ಲದಿದ್ದರೂ,
ಇನ್ಯಾರೋ ನಿನ್ನ ಕದ್ದುಬಿಡಬಹುದೆಂಬ
ಅನುಮಾನವಿಲ್ಲದಿದ್ದರೂ...
ನಿನ್ನೊಡನೆ ಕಳೆದ ಸುಮಧುರ
ಕ್ಷಣಗಳು ಮರೆತಿಲ್ಲವಾದ್ದರಿಂದ,
ಜೀವನದ ಪ್ರತಿ ಕ್ಷಣವೂ ಮಧುರವಾಗಲೆಂದು
ಮನ ಬಯಸುತ್ತದಾದ್ದರಿಂದ...
ನೆನೆವ ಪ್ರತಿ ಮಳೆಯಲ್ಲೂ,
ಖುಷಿಯ ಪ್ರತಿ ನಗುವಿನಲ್ಲೂ,
ಕಾಡುವ ಪ್ರತಿ ಏಕಾಂತದಲ್ಲೂ,
ಸಂಭ್ರಮದ ಪ್ರತಿ ಬೆಳಗಿನಲ್ಲೂ,
ನೀನು ಜೊತೆಗಿರಲೇಬೇಕೆಂದು
ಮನ ಬಯಸಿದರೆ, ಅದು ತಪ್ಪಾದೀತಾ?
ಜನಜಂಗುಳಿಯ ಮಧ್ಯೆ
ನಿನ್ನ ಕೈ ಹಿಡಿದು ನಡೆವಾಗ
ತಕ್ಷಣ ನಿರ್ಮಿತವಾಗಿಬಿಡುವ
ಸುಂದರ ಏಕಾಂತ
ಮತ್ತೆ ಮತ್ತೆ ಬೇಕೆಂದು
ಮನ ಬಯಸಿದರೆ, ಅದು ದುರಾಸೆಯಾದೀತಾ?
ತಪ್ಪಾದರೂ ಸರಿ,
ನನ್ನೊಂದಿಗಿರಲೇಬೇಕು ನೀನು
ನಾ ಬಯಸಿದಾಗೆಲ್ಲ..
ನಿನ್ನೆದೆಯಲ್ಲಿ ಅಡಗಿಕೊಂಡು
ತಪ್ಪಿಸಿಕೊಳ್ಳಬೇಕು ನಾನು
ನೀ ನನ್ನ ಹಿಡಿಯಲು ಬಂದಾಗೆಲ್ಲ...
14 comments:
Cool.. n really very nice lines:)
@ Kantesh,
Thank You.
ಇಷ್ಟವಾಯಿತು.. :)
ತಪ್ಪಲ್ಲ ಬಿಡಿ........
ಪ್ರೀತಿ ಎಂದರೆ ಹಾಗೇನೆ.....
ಚನ್ನಾಗಿದೆ.....
tumba,,chennagide.....madam...keep writing
svalpa ishTe ishTu possessive kavana..... tumbaa chennaagide ...
Thanks alot..
@ Dinakar,
ಹ್ಹ ಹ್ಹ... ಹೌದು, possessive ಕವನ...
ಚನ್ನಾಗಿದೆ....:)
ಅದು ತಪ್ಪಾದೀತಾ?..illa..!
ದುರಾಸೆಯಾದೀತಾ? chooru adeetu..!
ultimately full possessive agibidtu..!
chennagide...kavana...plus chitra..
ananth
ಕೊನೆ ಪ್ಯಾರಾದ ಬಯಕೆ ಮತ್ತು ಕಲ್ಪನೆ ತುಂಬಾ ಚಂದ ಚಂದ....
olle reshmesiireya nayavaada sparshada haage innu muttabekennuva... odabekembaa aakarshane!...
ಛೊಲೊ ಇದ್ದೇ ಕವನ.
ನಿನ್ನೆದೆಯಲ್ಲಿ ಅಡಗಿಕೊಂಡು
ತಪ್ಪಿಸಿಕೊಳ್ಳಬೇಕು ನಾನು
ನೀ ನನ್ನ ಹಿಡಿಯಲು ಬಂದಾಗೆಲ್ಲ...
ಈ ಬಯಕೆಯ ಕಲ್ಪನೆಯೇ ಬಲು ಚಂದ...
ಇಷ್ಟು cute ಆದ possessiveness ಕೂಡ ಚಂದವೇ...
Post a Comment