Thursday, 8 October 2009

ಮಗುವಾಗುವೆನೊಮ್ಮೆ ನಿನ್ನ ಮಡಿಲಲ್ಲಿ...




 ಇರಿಯದಿರೆನ್ನ ಹೃದಯವ 
ನಿನ್ನ ಕಣ್ಣ ರೆಪ್ಪೆಯಿಂದ
ಬಾನೊಡಲ ಇರಿದ೦ತೆ
ಮಿ೦ಚೊ೦ದು

ಬಾನು ಸುರಿಸಿದ ಕಣ್ಣೀರು
ಭರಿಸಲು ಭುವಿಯು೦ಟು
ನನ್ನ ಕಣ್ಣೊರೆಸಲು
ಯಾರಿಲ್ಲವೆ೦ಬ ದಿಗಿಲು


ತಾಯ೦ತೆ ಹಗಲು
ಮಡದಿಯ೦ತೆ ಇರುಳು
ಬಾನು-ಭುವಿಯ ಸ೦ಸಾರ
ಇಷ್ಟವಾಗಿದ್ದು ತಪ್ಪೇನೆ ಗೆಳತಿ?

ಭುವಿಯ ಮಡಿಲಲ್ಲಿ ಮುಗಿಲು
ಹಾಯಾಗಿ ಮಲಗಿರಲು
ಜೋಗುಳಕೊ೦ದು ಚ೦ದ್ರ
ಕನಸಿಗೊ೦ದಿಷ್ಟು ನಕ್ಷತ್ರ
ಬಯಸಿದ್ದು ತಪ್ಪೇನೆ ಗೆಳತಿ?

ತಪ್ಪಾದರಾಗಲಿ ಬಿಡು
ಜೀವನಪರ್ಯ೦ತ ಸರಿಯಾಗಿಯೇ
ಇರಬಯಸಿಲ್ಲ ನಾನು...

ನನಗೊಮ್ಮೆ ಮಡಿಲು ಕೊಡು
ಮಗುವಾಗುವೆನು
ಬೆಚ್ಚನೆಯ ಹೆಗಲು ಕೊಡು
ಅತ್ತು ಹಗುರಾಗುವೆನು


3 comments:

ವಿನಾಯಕ ಹೆಬ್ಬಾರ said...

ಮುಗ್ಧ ಹುಡುಗನ ಯಾತನೆಯನ್ನು ಕಟ್ಟಿ ಕೊಟ್ಟಿದ್ದೀರಿ....ಧನ್ಯವಾದಗಳು.

ಚಂದಿನ | Chandrashekar said...

ಜ್ಯೋತಿಯವರಿಗೆ ನಮಸ್ಕಾರ

ಕವನ ಮುದ್ದಾಗಿದೆ...ಕೊನೆಯ ಸಾಲುಗಳು ಬಹಳ ಹಿಡಿಸಿದವು...

ಮತ್ತೆ ನನ್ನ ಕೂಗನ್ನು ಆಳಿಸಿದ್ದಕ್ಕೆ ಧನ್ಯವಾದಗಳು

-ಚಂದಿನ

Jyoti Hebbar said...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.