ದಟ್ಟ ಕಾನನದ ನಡುವೆಯೂ
ತೆರೆಯುವುದು ಕಾಲು ದಾರಿ ನನಗಾಗಿ.
ಹೆದ್ದಾರಿಯಲಿ ನಡೆವರೇನು ಬಲ್ಲರು
ಕಾಲು ದಾರಿಯಲಿ ಜಿಗಿವ ಸುಖವ?
ಆಸರೆಯಿಲ್ಲದೆಯೇ ಹಾಯಾಗಿ
ನಿಲ್ಲುವುದು ಸೇತುವೆ ನನಗಾಗಿ.
ಭಯಪಡುವವರೇನು ಬಲ್ಲರು
ಭರವಸೆಯ ಸುಖವ?
ಕಡುಗಪ್ಪನೆಯ ರಾತ್ರಿಯಲ್ಲೂ
ಬಾನ ಬೆಳಕೊಂದು ಮಿನುಗುವುದು ನನಗಾಗಿ
ಇರುಳಿಗಂಜಿ ಕಣ್ಮುಚ್ಚಿದವರೇನು ಬಲ್ಲರು
ಕತ್ತಲು ಸುರಿವ ಸುಖವ?
ಅಲೆಗಳು ಕೂಡ ಕುಣಿಕುಣಿದು
ಬಂದು ಅಪ್ಪಿ ಮುದ್ದಾಡುವವು ನನ್ನ
ದೂರ ದಡದಲಿ ನಿಂತವರೇನು ಬಲ್ಲರು
ಅಲೆಗಳಪ್ಪುವ ಸುಖವ?
ಸುಳಿಗೆ ಸಿಲುಕಿ ಮುಳುಗಿದರೂ
ನಾನಿರುವಲ್ಲಿಗೆ ಬರುವುದು.
ಸೂರ್ಯರಶ್ಮಿ ಎಳೆಯಾಗಿ
ಕರೆತರಲು ನನ್ನ ಕಡಲಾಳದಿಂದ.
ಭಯಪಡುವರೇನು ಬಲ್ಲರು
ಭರವಸೆಯ ಸುಖವ?
7 comments:
u r right dear, hope annodu tumba mukhya ......
ಜ್ಯೋತಿಯವರೇ, ಮೊಅದಲಿಗೆ ನಿಮ್ಮೆಲ್ಲ ಆಶೋತ್ತರಗಳು ಭರವಸೆಯನ್ನು ಹುಟ್ಟುಹಾಕಲಿ ಎಮ್ದು ಹಾರೈಸಿ .....ಭಯಪಡುವವರೇನು ಬಲ್ಲರು
ಭರವಸೆಯ ಸುಖವ? ಎನ್ನುವುದಕೆ ನನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇನೆ...ಒಳ್ಳೆಯ ಭಾವಮಂಥಿತ ಚಿಂತನಕ್ಕೆ ಅಕ್ಷರಗಳು ಪದಗಳಾಗಿ ರೂಪನೀಡಿವೆ...ಮುಂದುವರೆಯಲಿ ನಿಮ್ಮ ಮಂಥನ..ಚಿಂತನ...
ಪ್ರಳಯದ ಬುರುಡೆ ಬಗ್ಗೆ ನನ್ನ ಬ್ಲಾಗ್ ಓದಿ ನಿಮ್ಮ ಅನಿಸಿಕೆಯನ್ನ ನಮೂದಿಸಿ...
ಜಲನಯನ ಬ್ಲಾಗ್ ಸ್ಪಾಟ್ ನಲ್ಲಿ...scientific basis ಮೇಲೆ ಅಲ್ಲಗಳೆದಿದ್ದೇನೆ...
ಭಾವಮಂಥನ ಬ್ಲಾಗ್ ಸ್ಪಾಟ್ ನಲ್ಲಿ ನಮ್ಮ ಪುರಾಣ ವೇದ ಮತ್ತು ನಮ್ಮ ಖಗೋಳ ಶಾಸ್ತ್ರಿಗಳ ಪ್ರಕಾರ..ಏನು ಎಂಬುದನ್ನು ತಿಳಿಸಿದ್ದೇನೆ..
ಜ್ಯೋತಿ ಅವರೆ, ಭರವಸೆ (hope) ಎನ್ನುವುದು ನಿರಂತರ ಹರಿಯುವ ನದಿ. "ಇರುಳಿಂದೆ ಬೆಳಕುಂಟು ತೋರಿಸಿರಿ" ಎಂಬ ಚಿತ್ರಗೀತೆಯಂತೆ ನಿಮ್ಮ ಕವನ ಕೂಡ ಆಶೋತ್ತರವನ್ನು ಹೆಚ್ಚಿಸುವ ಬರಹವಾಗಿದೆ. ಧನ್ಯವಾದಗಳು
Thank u...
nija....idonde kavanadinda kaliyuvudu tumba ide....
nimma bharavase husi aagadirali:) olleya kavana.
ಅರ್ಥಪೂರ್ಣ ಸಾಲುಗಳು....ಭಯಕ್ಕೂ ಭರವಸೆಯ ಸುಖ ದಕ್ಕಲೆಂದು ಆಶಿಸುತ್ತಾ...
Post a Comment