Tuesday, 5 January 2010

ನೀನೆನಗೆ ಆತ್ಮ ಸಂಗಾತಿ.





ನಿನ್ನೊಡನೆ ಇರಬಲ್ಲೆ
ನನ್ನೊಳಗೆ ನಾನಿದ್ದರೂ
ನನ್ನಾತ್ಮ ನಿನ್ನ ಮನೆ
ಆದರೂ ನನಗಾಶ್ರಯ ನೀನೆ


ನನ್ನೊಡಲ ತುಂಬೆಲ್ಲ
ನಿನ್ನದೇ ಘಮ ತುಂಬಿ
ಕೊರೆವುದೊಡಲನು ಏಕೆ
ಮತ್ತೆ ಬಯಕೆಯ ದುಂಬಿ


ಜೀವ ಭಾವಗಳ ಹಂಗಿಲ್ಲ
ಕಾಲ ದೇಶಗಳ ಮಿತಿಯಿಲ್ಲ
ಅಳಿವೆನೆಂಬ ಭಯವಿಲ್ಲ
ಉಳಿಯಲೆಂಬ ಮೋಹವಿಲ್ಲ


ನೀನೆನಗೆ ಆತ್ಮ ಸಂಗಾತಿ.


5 comments:

ಸಾಗರದಾಚೆಯ ಇಂಚರ said...

Wonderful, nicely written

ದಿನಕರ ಮೊಗೇರ said...

ಜ್ಯೋತಿ ಮೇಡಂ,
ತುಂಬಾ ಚೆನ್ನಾಗಿವೆ ಕವನದ ಸಾಲುಗಳು.... ಅದರಲ್ಲೂ
ನಿನ್ನೊಡನೆ ಇರಬಲ್ಲೆ
ನನ್ನೊಳಗೆ ನಾನಿದ್ದರೂ
ನನ್ನಾತ್ಮ ನಿನ್ನ ಮನೆ
ಆದರೂ ನನಗಾಶ್ರಯ ನೀನೆ
ಎಂಬ ಸಾಲು ತುಂಬಾ ಇಷ್ಟವಾಯ್ತು...... ಧನ್ಯವಾದಗಳು......

ಕನಸು said...

ಜ್ಯೋತಿ ಮೇಡಂ,
ತುಂಬಾ ಚೆನ್ನಾಗಿವೆ
ನಿಮ್ಮ ಕವಿತೆಗಳು
ಧನ್ಯವಾದಗಳು
ಮತ್ತೆ ಬರೆಯಿರಿ
ಬಿಡುವಿದ್ದಾಗ ನಿಮ್ಮ ಎಲ್ಲ ಕವಿತೆ ಮೇಲೆ
ಕಣ್ಣಾಡಿಸುವೆ

Jyoti Hebbar said...

Thank u so much...

bp said...

hi i red ur blog contents.... they are superb... keep it up... i dnt knw u but i instantly found ur blog some how... but superb content,,,,