Tuesday, 12 January 2010

ನಿನಗೆ ಪ್ರಣಾಮ.




ತುಂತುರುವಿನಂತೆ
ಶುರುವಾಗಿ
ಭೋರ್ಗರೆದು
ಮಳೆಯಾಗಿ
ನನ್ನೊಡಲ ಆವರಿಸಿ
ಹಸಿರು ಚಿಗುರಿಸಿ
ನಲಿದವನೆ
ನಿನಗೆ ಅನಂತ ಪ್ರಣಾಮ.

ನನ್ನ ಭಾವದೆಳೆಗಳ
ತುಂಬ
ನಿನ್ನ ಮುತ್ತುಗಳ
ತಂದಿರಿಸಿ
ಪೋಣಿಸಿ
ಸಿಂಗರಿಸಿ
ನನ್ನ ಮೆರೆಸಿ
ನಲಿದವನೆ
ನಿನಗೆ ಅನಂತ ಪ್ರಣಾಮ.

ನಿನ್ನ ಬಿಸಿಯುಸಿರ
ಭಾರಕ್ಕೆ
ದಣಿದು ನಿನಗೇ ಒರಗಿದಾಗ
ಮಡಿಲಾಗಿ
ತಾಯಾಗಿ
ನನ್ನ ಸಂತೈಸಿ
ನಲಿಸಿ
ನಲಿದವನೆ
ನಿನಗೆ ಅನಂತ ಪ್ರಣಾಮ.

14 comments:

ದಿನಕರ ಮೊಗೇರ said...

ಜ್ಯೋತಿ ಮೇಡಂ,
ಅಕ್ಷರಗಳನ್ನು ಪೋಣಿಸಿ ಅನಂತ ಪ್ರಣಾಮಗಳನ್ನು ತಿಳಿಸಿದ್ದೀರಾ..... ಮುತ್ತುತ್ತವೆ ಅವರಿಗೆ...... ಧನ್ಯವಾದ ನಿಮ್ಮ ಅಕ್ಷರ ಹಾರಕ್ಕೆ....

ಆನಂದ said...

ಸುಂದರ ಕವನ. ಇಷ್ಟವಾಯ್ತು.

ಬಾಲು ಸಾಯಿಮನೆ said...

ಅದ್ಭುತ ಭಾಷೆ ನಿಂದು. ಆಕಸ್ಮಿಕವಾಗಿ ಹೆಜ್ಜೆ ಗುರುತು ಕಂಡವ ಎಲ್ಲ 'ಹೆಜ್ಜೆ'ಗಳನ್ನೂ ಓದಿ ಬಂದೆ.
ಬರವಣಿಗೆ ಹೀಗೆ ಸಾಗಲಿ; ಮತ್ತಷ್ಟು ವೈವಿಧ್ಯತೆಯೊಂದಿಗೆ.

ಮುಸ್ಸ೦ಜೆ said...

ಭಾವನಾತ್ಮಕ ಕವನವನ್ನು ನಮ್ಮೆಲ್ಲರೆದುರಿಗಿಟ್ಟ ನಿನ ನನ್ನ ಪ್ರಣಾಮ :)

ಶಿವಪ್ರಕಾಶ್ said...

Super...

ಸಾಗರದಾಚೆಯ ಇಂಚರ said...

Wonderful, well written

ಗೌತಮ್ ಹೆಗಡೆ said...

NICE RE:)

shivu.k said...

ಜ್ಯೋತಿ ಮೇಡಮ್,

ಒಂದೊಂದೆ ಪದ ಬಳಸಿ ಕವನ ಬರೆಯುವುದು ಸುಲಭವಲ್ಲ...ಇಂಥ ಕವನಗಳು ನನಗೆ ಇಷ್ಟ. ಚೆನ್ನಾಗಿದೆ...ಗುರುಮಾರ್ತಿ ಹೆಗಡೆಯವರ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಬಂದೆ. ಚೆನ್ನಾಗಿ ಬರೆಯುತ್ತೀರಿ...

ನನ್ನ ಬ್ಲಾಗಿಗೊಮ್ಮೆ ಬೇಟಿಕೊಡಿ..ಅಲ್ಲಿ ಫೋಟೊಗಳಿವೆ. ಅವುಗಳ ಕತೆಗಳಿವೆ..

http://chaayakannadi.blogspot.com/

Nisha said...

Jyothi
Thumba chennagi hara poNisiddeera. Sogasagide kavana.

ದೀಪಸ್ಮಿತಾ said...

ಜ್ಯೋತಿಯವರೆ, ಸುಂದರ ಕವನಕ್ಕೆ ನಿಮಗೂ ಅನಂತ ಪ್ರಣಾಮಗಳು

Jyoti Hebbar said...

ನಿಮಗೆಲ್ಲರಿಗೂ ಕೂಡ ನನ್ನ ಅನಂತ ಪ್ರಣಾಮಗಳು..
ನಿಮ್ಮ ಮೆಚ್ಚಿಗೆ ಓದಿ ಮನಸ್ಸು ತುಂಬಿ ಬಂತು..

ಜಲನಯನ said...

ಜ್ಯೋತಿ, ಮಳೆಯಾಗಿ ಆವರಿಸಿ..ಹಸಿರು ಚಿಗುರಿಸಿ ನಲಿದವನೆ...ಇದು...ಧನ್ಯವಾದಕ್ಕೆ ಬಹು ಸೂಕ್ತ ಕಾರಣ...ಅದನ್ನು ಹಾಗೇ ..ಮುತ್ತಿನ ಮಾಲೆಗೆ ತಾಯ ಸಾಂತ್ವನಕ್ಕೆ ಹೆಣೆದು ಧನ್ಯವಾದಕ್ಕೆ ಕಾರಣಕೊಟ್ಟಿರುವ ಪರಿ ..ಮೆಚ್ಚುಗೆಯಾಯಿತು

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಜ್ಯೋತಿಯವರೆ,
ನಿಮ್ಮೆಲ್ಲಾ ಕವನಗಳನ್ನು ಓದಿದೆ.ಅತ್ಯ೦ತ ಸು೦ದರವಾಗಿ,ಆಕರ್ಷಕವಾಗಿ ಕವನ ಕಟ್ಟುವ ಪರಿ ನಿಮಗೆ ತಿಳಿದಿದೆ.ಹಾಗೆಯೆ ಕವನಗಳಲ್ಲಿ ಗ೦ಭೀರತೆಯಿದೆ.
ಇನ್ನಷ್ಟ್ಟು ಕವನಗಳು ಹರಿದು ಬರಲಿ,
ಪರಿಚಯಕ್ಕಾಗಿ ದನ್ಯವಾದ.
GOOD LUCK

ಸೀತಾರಾಮ. ಕೆ. / SITARAM.K said...

very nice one