ಸಾಗರದ ನಡುವೆ
ದೋಣಿಯ ತುದಿಗೆ ನಿಂತು
ಸಹಾಯ ಕೇಳುವಾಗ
ನೀ ಬಂದು,
ಸಖ್ಯ ಸುಖ ತಿಳಿಯಿತೆ?
ಎಂದು ಪಿಸುನುಡಿದರೆ
ಏನುತ್ತರಿಸಲಿ ನಿನಗೆ?
ನಿನ್ನನ್ನು ರಸಿಕನೆನ್ನಲೋ?
ಮೂರ್ಖನೆನ್ನಲೋ?
ನಾ ನಿನ್ನ ತಬ್ಬಿ ಅತ್ತಿದ್ದು
ಪ್ರೀತಿಗಲ್ಲ, ಭಯಕ್ಕೆ
ನಾನಂದು ನಕ್ಕಿದ್ದು
ನಿನ್ನ ಕಂಡ ಖುಷಿಗಲ್ಲ
ನನ್ನ ದುಃಖ ಮರಯಲಿಕ್ಕೆ
ಎಂದು ಹೇಳುವುದು
ಹೇಗೆ ನಿನಗೆ?
ಬಾಯ್ಬಿಟ್ಟು ನಾ ಸ್ವಾರ್ಥಿ
ಎನ್ನಲಾಗದೆ ತಳಮಳಿಸುತ್ತಿರುವಾಗ
ಹಸಿವಾಯಿತೆ? ಎಂದು ತುತ್ತಿಡಲು ಬಂದರೆ
ಏನೆನ್ನಲಿ ನಿನಗೆ?
ಬದುಕಿನಂಗಳದ ತುಂಬ
ನನ್ನದೇ ಬಿಂಬ
ತುಂಬಿಕೊಳ್ಳಬಯಸುವ ನೀನು
ನನ್ನ ಅಂಗಳದ ತರಗೆಲೆಯಂತೆ
ನನಗೆ ಕಂಡಾಗ
ಹೇಳುವುದು ಹೇಗೆ ನಿನಗೆ?
9 comments:
ಕವನ ಚೆನ್ನಾಗಿದೆ.
ಆದರೆ ಕವನದ ಭಾವಕ್ಕೆ..
ಚಿತ್ರದ ಕೂಸು ತುಸು ಎಳಸಾಯಿತೇನೋ???
"ಎಂದು ಹೇಳುವುದು
ಹೇಗೆ ನಿನಗೆ?"
ಹಹ್ಹಹ್ಹ ಪರವಾಗಿಲ್ಲ ಸರ್.. ಹೇಗಾದರೂ ಹೇಳಿ...
ಮನದ ಭಾವಗಳನ್ನು ಬಹಳ ಚೆನ್ನಾಗಿ ಬಣ್ಣಿಸಿದ್ದೀರಿ..
ಅಭಿನಂದನೆಗಳು ಚಂದದ ಕವನಕ್ಕೆ...
nice one!!!!
ಸ್ವಾರ್ಥದ ಪರಿಯಲ್ಲಿ ಯೋಚಿಸುವ ಇರ್ವರ ಭಾವಗಳ ವೈರುದ್ಧ್ಯಗಳ ಚೆ೦ದದ ಚಿತ್ರಣ.
ಸುಂದರವಾದ ಸಾಲುಗಳು ....
ಚಿತ್ರ ಕವನಕ್ಕೆ ಸಮ೦ಜಸವಗಿಲ್ಲ ಅಂತ ನನ್ನ ಅನಸಿಕೆ ....
ಮೇಡಂ,
ಒಳ ತುಡಿತ ಸೊಗಸಾಗಿ ಮೂಡಿಬಂದಿದೆ. ಮತ್ತೆ ಮತ್ತೆ ಮೆಲಕುಹಾಕುವ ಸವಿ ಕ್ಷಣಗನ್ನೂ, ಮರೆಯಬೇಕೆಂದರೂ ಸದಾ ಕಾಡುವ ಕಹಿ ಕ್ಷಣಗಳನ್ನೂ ಆವರ್ತನಗೊಳಿಸುವುದೇ ನಮ್ಮ ಅಂತರಂಗ!
"ನಾ ನಿನ್ನ ತಬ್ಬಿ ಅತ್ತಿದ್ದು
ಪ್ರೀತಿಗಲ್ಲ, ಭಯಕ್ಕೆ
ನಾನಂದು ನಕ್ಕಿದ್ದು
ನಿನ್ನ ಕಂಡ ಖುಷಿಗಲ್ಲ
ನನ್ನ ದುಃಖ ಮರಯಲಿಕ್ಕೆ
ಎಂದು ಹೇಳುವುದು
ಹೇಗೆ ನಿನಗೆ?"
ಚೆನ್ನಾಗಿ ಬರೆಯುವ ಕಲೆ ನಿಮಗಿದೆ. ಹೆಚ್ಚು ಹೆಚ್ಚು ಬರೆಯಿರಿ.
- Badarinath Palavalli
Sr. Cameraman / Kasthuri Tv / Bengaluru
Please visit my Kannada Poetry blog:
www.badari-poems.blogspot.com
Your valuable comments are path finder for me
ಚೆನ್ನಾಗಿ ಬರೆದಿದ್ದೀರಾ ಮೇಡಂ,
ಓದುಗರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಕವನ.
ಒಮ್ಮೆ ನನ್ನ ಬ್ಲಾಗಿಗೂ ಬನ್ನಿ
http://pravi-manadaaladinda.blogspot.com
ಈ ಪದಗಳು ನಿಮ್ಮ ಜೀವನದ ಅನುಭವಗಳ ಅಂತ ಒಮ್ಮೆ ಅನಿಸುತ್ತದೆ ನನಗೆ ...ಹಾಗಿದ್ದಲ್ಲಿ ಆ ಹೆಜ್ಜೆ ಗುರುತುಗಳು ಉಳಿಯದಿರಲಿ
--
Day dreamer
Post a Comment