Thursday, 17 June 2010

ಕಾರಣವೇನು?

ಅವನೊಡನೆ ಹೋಗಬೇಡವೆಂದ
ತಾಯ್ತಂದೆಯ ಕಾಳಜಿ
ಕಟ್ಟಳೆಯಂತೆ
ಅವರು ಒರೆಸಿಕೊಂಡ ಕಣ್ಣೀರು
ನಾಟಕದಂತೆ
ತೋರಿದ  ಹುಡುಗಿಗೆ,

ಹಳೆಯ ಗೆಳೆಯರೊಂದಿಗೆ
ಮಾತನಾಡಬೇಡವೆಂದು
ಸಿಡುಕಿದ ಪ್ರೇಮಿಯ
ಕಟ್ಟಳೆಗಳು
ಉತ್ಕಟ ಪ್ರೇಮವೆಂದು
ಭಾಸವಾದರೆ...

ಅದಕ್ಕೆ ಕಾರಣ
ವಯಸ್ಸೋ?
ಪ್ರೇಮವೋ?

4 comments:

ಸೀತಾರಾಮ. ಕೆ. / SITARAM.K said...

"ಕುರುಡು ಪ್ರೇಮ" ವೆನ್ನಬಹುದು.
ಚೆ೦ದದ ಹನಿಗವನ
ಇನ್ನು ಬರಲಿ!

Dileep Hegde said...

ಕಾರಣ ಖಂಡಿತಾ ಪ್ರೇಮ..
ನಮಗೆ ಒಬ್ಬ ವ್ಯಕ್ತಿ ಅಥವಾ ವಸ್ತು ಇಷ್ಟವಾಯ್ತು ಅಂದ್ರೆ ಅದರ/ ಅವರ ಗುಣ-ಅವಗುಣಗಳನ್ನ ಲೆಕ್ಕಿಸದೆಯೇ ನಾವು ಇಷ್ಟ ಪಡುತ್ತೇವೆ..
ಅವಗುಣಗಳೂ ಕೂಡ ಸದ್ಗುಣಗಳಂತೆ ಭಾಸವಾಗ ತೊಡಗುತ್ತವೆ.. ಹುಡುಗಿಗೆ ಹುಡುಗ ಅಂದ್ರೆ ಇಷ್ಟ.. ಅವನು ಏನು ಮಾಡಿದರೂ ಸರಿ... ಹುಡುಗನಿಂದ ದೂರ ಮಾಡುವ ಮನೆಯವರ ಎಲ್ಲ ನಡುವಳಿಕೆಗಳು ಅವಳಿಗೆ ತಪ್ಪೆಂದು ಕಾಣ ತೊಡಗುತ್ತದೆ...

Dr.D.T.Krishna Murthy. said...

ಅದನ್ನು ಮೋಹ ಎನ್ನಬಹುದೇನೋ!ಕವನ ಚೆನ್ನಾಗಿದೆ.

Unknown said...

preeti,,,!
preeti,,,,!!

E preetiya nowu, naliwu.. tilidawaraaru.. nanage tilidilla...! sundarawada saalugalu..