ಕಡಲ ದಂಡೆಗೆ ಮರಳಿ..
ಮರಳಿನಾಟವ ಆಡಿ...
ಮತ್ತೆ ಕಡಲಿಗೆ ಮರಳಬೇಕು ...
ಮರಳ ಮನೆಯನು ಕಟ್ಟಿ
ಮೋಹದಲಿ ಮರುಳಾಗಿ
ನನ್ನದೆನ್ನುತ ಬೀಗಿ
ಕಳೆದುಕೊಂಡು ಮತ್ತೆ
ಮರುಗುವೆನು ಮರುಳನಂತೆ
ಕಡಲೊಳಗೆ ಕಳೆದೊಡನೆ
ದಂಡೆಯಲಿ ಹುಡುಕುವೆನು
ಸಿಗದೇ ಒದ್ದಾಡುವೆನು
ಹುಡುಕುತಲಿ ಕಳೆದದ್ದೇ
ಮರೆಯುವೆನು
ಆಟವಾಡಲು ಬಂದು
ಆಟವನೆ ಮರೆತು
ದಂಡೆಯಲೇ ಕಾಲೂರಿ
ಮರಳಲೊಲ್ಲೇನೆಂದು
ಕಣ್ಣೀರು ಕರೆವಾಗ
ಮೇಲೆ ನಿಂತವನು
ನೋಡಿ ನಸುನಕ್ಕನಂತೆ !!!!
ಹೌದು ಮರೆತಿದ್ದೆ,
ಕಡಲ ದಂಡೆಗೆ ಮರಳಿ..
ಮರಳಿನಾಟವ ಆಡಿ...
ಮತ್ತೆ ಕಡಲಿಗೆ ಮರಳಬೇಕು ...
11 comments:
Superb,
keep going
ಅದ್ಭುತ ಕವನ ಬರೆದಿದ್ದೀರಲ್ಲಾ ಮೇಡಂ!ಸೂಪರ್!ಆಧ್ಯಾತ್ಮಿಕದ ಛಾಯೆ ಗೊತ್ತೇ ಆಗದಂತೆ ಸೇರಿಕೊಂಡಿದೆ.ಕಡಲಿಂದ ಬಂದವರೆನ್ನುವುದ ಮರೆತು ಮರಳಿನಾಟದಲ್ಲೇ ಮೈಮರೆತವರು ನಾವು.ತುಂಬಾ ಖುಷಿಯಾಯಿತು.
ಅದ್ಭುತ... :)
ಕವಿತೆ ತುಂಬಾ ಇಷ್ಟವಾಯ್ತು...
ಬಂದವರೆಲ್ಲ ಬಂದ ಉದ್ದೇಶ ಮರೆತು ಇನ್ಯಾವುದರಲ್ಲೋ ಕಳೆದು ಹೋಗಿ ನಂತರ ಹೋಗೋದಿಲ್ಲ ಅಂತ ರಚ್ಚೆ ಹಿಡಿದರೂ ಅವನು ಬಿಡ್ತಾನಾ..?? ಹೋಗಲೇ ಬೇಕು...
ಕನಸುಗಳ ಕಾಣುವದು, ಅದನ್ನು ಬೆ೦ಬತ್ತುವದು, ಸಿಗದೇ ನಿರಾಶನಾಗಿ ಮತ್ತೆ ಕನಸ ಕನವರಿಸುವದು -ಜೀವನದ ನಿರ೦ತರ ಹೋರಾಟ ಮರಳಿನಾಟದಲ್ಲಿ ನಿರತ ಕಡಲ ಅಲೆಗಳಿಗೆ ಹೋಲಿಸಿದ್ದು ಚೆನ್ನಾಗಿದೆ. ತು೦ಬಾ ಚೆ೦ದದ ಕವನ.
ಮರಳ ಮನೆಯನು ಕಟ್ಟಿ
ಮೋಹದಲಿ ಮರುಳಾಗಿ
ನನ್ನದೆನ್ನುತ ಬೀಗಿ
ಕಳೆದುಕೊಂಡು ಮತ್ತೆ
ಮರುಗುವೆನು ಮರುಳನಂತೆ
sundara saalugalu........ tumbaa chennaaide.......
ಅದ್ಭುತವಾದ ಕವನ. ಅಧ್ಯಾತ್ಮದ ಎಳೆಯೊಂದು ಕದಲಿನಾಳದಿಂದಲೇ ಎಳೆದು ತಂದು ನಮ್ಮೊಡನೆ ಹಂಚಿಕೊಂಡಂತಿದೆ. ಸುಂದರವಾಗಿ ಬರೆದಿದ್ದೀರಿ.
-ವಿನಯ್.
superb
superb
superb
Thank You.. Thanks alot...
"ಹೌದು ಮರೆತಿದ್ದೆ,
ಕಡಲ ದಂಡೆಗೆ ಮರಳಿ..
ಮರಳಿನಾಟವ ಆಡಿ...
ಮತ್ತೆ ಕಡಲಿಗೆ ಮರಳಬೇಕು ..."
ತುಂಬಾ ಚೆನ್ನಾಗಿದೆ . . .
Post a Comment