ಪ್ರೀತಿ ಪ್ರೆಮವೆಲ್ಲ
ಹೊಟ್ಟೆ ತುಂಬಿದ ಮೇಲೆ...
ಬಯಕೆ ತೀರಿದವರಿಗೆ
ಬದುಕು ಭಗವಂತನ ಲೀಲೆ...
ಮಣ್ಣಾದರೂ ಅನ್ನವಾಗಲೆಂದು
ಕನಸು ಕಾಣುವಾಗ,
ನಿನ್ನ ಹಸಿವೆಲ್ಲ ಕನಸು
ಈ ಜಗವೊಂದು ಮಾಯೆ
ಎಂದರೆ ಕೇಳಲಾಗುವುದೇ?
ಹಾಲು ಬತ್ತಿದೆದೆಯನು ತೆರೆದು
ಹಸಿದ ಕೂಸಿನ ಬಾಯಿಗಿಡುವಾಗ
ಹೊನ್ನು ಕಾಣದ ಕಣ್ಣು
ನೀರು ಬತ್ತಿದ ಕೂಸಿನ ಕಣ್ಣಲ್ಲಿ
ಹೊಂಬೆಳಕ ಕಂಡಾಗ
ಹೊನ್ನೆಲ್ಲ ಮಣ್ಣು
ಎಂದರೆ ನಂಬಲಾಗುವುದೇ?
ಬಿಟ್ಟು ಹೋಗಲು ಏನೂ
ಇಲ್ಲದವನಿಗೆ
ಎಲ್ಲ ಬಿಟ್ಟು ಹೋಗಿ ಬುದ್ಧನಾಗು
ಎಂದರೆ ಬಿಡುವುದಾದರೂ ಏನನ್ನು?
ಬಿಡಲಾದರೂ ಕೂಡಿಸಬೇಕಲ್ಲ
ಎನಿಸದೇ ಇದ್ದೀತೆ?
9 comments:
ಬಿಟ್ಟು ಹೋಗಲು ಏನೂ
ಇಲ್ಲದವನಿಗೆ
ಎಲ್ಲ ಬಿಟ್ಟು ಹೋಗಿ ಬುದ್ಧನಾಗು
ಎಂದರೆ ಬಿಡುವುದಾದರೂ ಏನನ್ನು?
ಬಿಡಲಾದರೂ ಕೂಡಿಸಬೇಕಲ್ಲ
ಎನಿಸದೇ ಇದ್ದೀತೆ?
ಈ ಸಾಲುಗಳು ತುಂಬಾ ಇಷ್ಟವಾಗಿತು :)
ಜ್ಯೋತಿಯವರೆ,ಚಿತ್ರ ಮತ್ತು ಕವನದ ಧ್ವನಿ ಅರ್ಥಪೂರ್ಣವಾಗಿದೆ.ಅಭಿನ೦ದನೆಗಳು.
ಕವನ ಅದ್ಭುತ.ಕೊನೆಯ ಸಾಲುಗಳು ತುಂಬಾ ಇಷ್ಟವಾದವು.
ಹೊಟ್ಟೆಗೆ ಹಿಟ್ಟಿಲ್ಲದಾಗ ಪ್ರೀತಿ,ಪ್ರೇಮ ,ತ್ಯಾಗ ಎಲ್ಲಾ 'ಬಂಕಂ'
ಎನಿಸತೊಡಗುತ್ತದೆ.Beaten track ಬಿಟ್ಟು ಬೇರೆಯದನ್ನೇ ನೋಡುವ,ಸತ್ವಯುತ ಕಾವ್ಯ ಕಟ್ಟುವ ರೀತಿ ಚೆನ್ನಾಗಿದೆ.ನನ್ನ ಬ್ಲಾಗಿಗೊಮ್ಮೆ ಬನ್ನಿ.ಧನ್ಯವಾದಗಳು.
ಜ್ಯೋತಿ,
ಚಂದ್ ಇದ್ದು
ಒಂದೊಂದು ಸಾಲಿಗೂ ಅದ್ಭುತ ಅರ್ಥ ಇದ್ದು
@ಜ್ಯೋತಿ ಶೀಗೇಪಾಲ್,
ಉಳಿದು ಹೋಗುವ ಹೆಜ್ಜೆ ಗುರುತು ಇದು! ಕವನ ಸದಾಶಯದಿಂದ ಕೂಡಿದೆ.. ಎಷ್ಟೋ ದಿನದಿಂದ ಇಂತಹ ಸಾಲುಗಳನ್ನು ಮಿಸ್ ಕೊಂಡಿದ್ನಲ್ಲಾ ಅಂತ ಅನ್ನಿಸ್ತಿದೆ. ಮಡುಗಟ್ಟಿದ ಭಾವಯಾನ ಚಿಮ್ಮಿ ಕಾವ್ಯದ ಸಾಲು ಒಡಮೂಡಿ ಬರಲಿ. ಒಳ್ಳೆಯ ಕವನ,ಓದು ನೀಡಿದ್ದೀರಿ ಧನ್ಯವಾದ.ಅಂದಹಾಗೆ ಈ ಬ್ಲಾಗ್ ಓದುವ ಅವಕಾಶ ಸಿಕ್ಕಿದ್ದುಗೌತಮ್ ಹೆಗಡೆಯವರು ಲಿಂಕನ್ನು ಫೇಸ್ ಬುಕ್ ನಲ್ಲಿ ಹಾಕಿದ್ದರಿಂದ ಅವರಿಗೂ ಧನ್ಯವಾದ.
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು
ಬಿಟ್ಟು ಹೋಗಲು ಏನೂ
ಇಲ್ಲದವನಿಗೆ
ಎಲ್ಲ ಬಿಟ್ಟು ಹೋಗಿ ಬುದ್ಧನಾಗು
ಎಂದರೆ ಬಿಡುವುದಾದರೂ ಏನನ್ನು?
ಬಿಡಲಾದರೂ ಕೂಡಿಸಬೇಕಲ್ಲ
ಎನಿಸದೇ ಇದ್ದೀತೆ?
tumbaa sundara, arthagarbhita saalugalu..... elladdakkoo ondu tookavide......
ತು೦ಬಾ ಚೆ೦ದದ ಕವನ. ಹಸಿದ ಹೊಟ್ಟೆಯವರಿಗೆ ಪ್ರೀತಿ, ಪ್ರೇಮ, ತ್ಯಾಗ, ನಿರ್ಮೋಹ ಇತ್ತ್ಯಾದಿ ಉಪದೇಶ ರುತಲೆ ಹೊಕ್ಕಿತೇ! ಕೊನೆಯ ಸಾಲ೦ತೂ ತು೦ಬಾ ಇಷ್ಟವಾಯಿತು.
ಜ್ಯೋತಿ...
ಕವನದ ಆಶಯ ತುಂಬಾ ಚೆನ್ನಾಗಿದೆ...
ಅಭಿನಂದನೆಗಳು ಚಂದದ ಕವನಕ್ಕೆ...
Post a Comment