Tuesday 13 October, 2009

ದುಃಖವಾಗಿದೆ ಎನ್ನುತಿದೆ ದುಃಖ



ಜಲಪಾತವಾಗಬಯಸಿದೆ ದುಃಖ
ಹರಿವ ನದಿಯಾಗಬಯಸಿದೆ ದುಃಖ
ಕಾನನದೊಡಲಿನ
ತರಗೆಲೆಯ೦ತಿದೆ ದುಃಖ

ಹರಿದರೆ ಸೇರಲು ಸಾಗರವಿಲ್ಲ
ಬಿಕ್ಕಳಿಸಲಿಕೊ೦ದು ತೆಕ್ಕೆಯಿಲ್ಲ
ದುಃಖವೇಕೆ೦ದು ಕೇಳಲಾರಿಲ್ಲವೆ೦ದೂ
ದುಃಖಪಡುತಿದೆ ದುಃಖ

ಬೀದಿಯೆ೦ಬ ಭಯವಿಲ್ಲದೇ
ಎಲ್ಲೆ೦ದರಲ್ಲಿ ಬೆತ್ತಲಾಗಬಯಸಿದೆ ದುಃಖ
ನಿರ್ಲಜ್ಜ ಹೆಣ್ಣಿನ೦ತೆ!

ಕಡಲ ಕಿನಾರೆಯಲ್ಲೊಮ್ಮೆ
ಬಿದ್ದು ಹೊರಳಾಡಬಯಸಿದೆ ದುಃಖ
ತ್ಸುನಾಮಿಯ ಹೊಡೆತಕ್ಕೆ
ಅನಾಥವಾದ ಮಗುವಿನ೦ತೆ!

ಕಾರಣೀಕರ್ತ ಜಗತ್ತಿನ ವಿರುದ್ಧ
ಮುಷ್ಕರ ಹೂಡುತ್ತದ೦ತೆ ದುಃಖ
ಜಗತ್ತನ್ನೇ ಜಗತ್ತಿನಿ೦ದ
ಬಹಿಷ್ಕರಿಸಬೇಕೆ೦ದಿದೆ ಈ ದುಃಖ!


5 comments:

Ittigecement said...

ಕವನದ ಭಾವಾರ್ಥ..
ಶಬ್ಧಗಳ ಹಿಡಿತ ..

ಎಲ್ಲವೂ ಚೆನ್ನಾಗಿದೆ...

ಅಭಿನಂದನೆಗಳು...
ಚಂದದ ಕವನಕ್ಕೆ...

ಚಂದಿನ | Chandrashekar said...

ಏಕೆ ಇಷ್ಟೊಂದು ದುಃಖ?

ವಿನಾಯಕ ಹೆಬ್ಬಾರ said...

ಆದರೆ ಈ ಜಗತ್ತಿನಿಂದ ಎಲ್ಲರ ದುಖವನ್ನೂ ಹೊರಗೆ ನೂಕುವುದೇ ನಮ್ಮ ಗುರಿ.
ದುಖವೆಲ್ಲ ಅಳಿದು, ಹೊಸ ಸಂತಸದ ಜ್ಯೋತಿಯನ್ನು ಈ ದೀಪಾವಳಿ ಬೆಳಗಲಿ.....

ಭಾವದ ಉತ್ತುಂಗದಿಂದ ಬಂದಂತಿರುವ ಸುಂದರ ಕವನಕ್ಕೆ ಅಭಿನಂದನೆಗಳು....

Jyoti Hebbar said...

Thank u so much...everybody...

Anonymous said...

superb dear...... e novugalu mundendu ninna badukinalli barade irli.............