Tuesday 8 December, 2009

ಮರೆತಿಹೆನೆ ನಿನ್ನ?



ಕಳೆದು ಹೋದ ಓಲೆ
ನನ್ನೊಲವು....
ಬೇರೆ ಓಲೆ ಬರೆಯಲೋ?
ಹಳೆಯದನ್ನೇ ಹುಡುಕಲೋ?


ತಿಳಿದಿರುವುದೇನೆಂದು
ತಿಳಿಯದಾಗಿದೆ.
ತಿಳಿಸೆಂದು ನಿನ್ನನ್ನೇ ಕೇಳಲೋ?
ನನ್ನ ತಿಳಿವಿನೊಳವನ್ನೇ ಕೆದಕಲೋ?


ಮಿತಿಮೀರಿದೆಯಂತೆ ಮರೆವು
ಕಾರಣ ಕೇಳಲು ನಸುನಗುತಿದೆ ಮನವು
ನಿನ್ನ ಮರೆಯಲೆತ್ನಿಸಿ ಉಳಿದೆಲ್ಲವನ್ನು
ಮರೆತಾಗಿದೆಯೆಂದು ಕೆಣಕುತಿದೆ ತಿಳಿವು.

11 comments:

ಶಿವಪ್ರಕಾಶ್ said...

Nice lines

ಸಾಗರದಾಚೆಯ ಇಂಚರ said...

Good one

ಮುಸ್ಸ೦ಜೆ said...

ಚೆನ್ನಾಗಿದೆ ಜ್ಯೊತಿ :) ಕೊನೆಯ ಸಾಲುಗಳು ಇಷ್ಟವದ್ವು :)

Dileep Hegde said...

hmm.. ಹಳೆಯದನ್ನ ಹುಡುಕೋದು ಬೇಡ.. ಹೊಸತನ್ನು ಬರೆಯಲು ಪ್ರಯತ್ನಿಸಿ.. ತಿಳಿಸೆಂದು ಯಾರನ್ನೂ ಕೇಳೋದು ಬೇಡ... ನಿಮ್ಮ ತಿಳಿವಿನೊಳಗೆ ಕೆದಕಿ ಅಂತ ಹೇಳೋಣ ಅಂದುಕೊಂಡೆ.. ಆದರೆ ಮರೆಯಬೇಕಾದ್ದೊಂದನ್ನು ಬಿಟ್ಟು ಮತ್ತೆಲ್ಲಾ ಮರೆತಿರುವ ಬಗ್ಗೆ ತಿಳಿವು ಕೆಣಕುತ್ತಿದೆ ಅಂತ ನೀವೇ ಹೇಳ್ತಿದೀರಾ.. ನಿಜ.. ಮರೆಯೋದು ತುಂಬಾ ಕಷ್ಟ.. ಹಾಗೆ ಮರೆಯಲು ಪ್ರಯತ್ನಿಸೋದು ಇನ್ನೂ ಕಷ್ಟ.... ನಿಮ್ಮ ತಿಳಿವಿಗೆ ತಿಳಿ ಹೇಳಿ ತಿದ್ದುವ ಶಕ್ತಿ ಸಿಗಲಿ.. ಕವನ ಚೆನ್ನಾಗಿದೆ...

ಆನಂದ said...

Its Nice!

Raghu said...

ಚೆನ್ನಾಗಿದೆ ನಿಮ್ಮ ಕವನ...
ನಿಮ್ಮವ,
ರಾಘು.

Jyoti Hebbar said...

Thanks to everyone...ತುಂಬಾ ಖುಷಿ ಆಯ್ತು... ನೀವೆಲ್ಲ ಓದಿದ್ದಕ್ಕೆ.Comments ಬರೆದಿದ್ದಕ್ಕೆ.

ಮಂಜುನಾಥ ತಳ್ಳಿಹಾಳ(Manjunath Tallihal) said...

"ಹಳೆ ಬೇರು ಹೊಸ ಚಿಗುರು ಕುಡಿದರೆ ಮರ ಸೋಬಗು" ತಿಳಿದವರು ಹೇಳಿದ ಮಾತಿದು, ಕಂಡಿತ ಕಳೆದುಹೊದದ್ದನ್ನು ಹುಡುಕುವದರಲ್ಲಿ ಅಥ ಇಲ್ಲ, ಹೊಸ ನೀರು ಬಂದಾಗ ಹಳೇ ನೀರು ಹೋಗಲೆ ಬೇಕು, ಅದೇ ಸೃಷ್ಟಿಯ ನಿಯಮ,
ಕವನ ತುಂಬಾ ಚನ್ನಾಗಿದೆ, ಶುಭಾಷಯಗಳು
*ಮಂಜುನಾಥ ತಳ್ಳಿಹಾಳ

ಕನಸು said...

ಹಾಯ್
ನಿಮ್ಮ
!!ಕಳೆದು ಹೋದ ಓಲೆ
ನನ್ನೊಲವು....
ಬೇರೆ ಓಲೆ ಬರೆಯಲೋ?
ಹಳೆಯದನ್ನೇ ಹುಡುಕಲೋ?
!!
ಎಂಬ ಕವಿತೆಯ ಸಾಲುಗಳು
ಇಷ್ಟವಾದವು
ಕಳೆದ ಓಲೆಯೇ ಇರಲಿ
ಅದಕ್ಕೆ ನಿಮ್ಮ ಮುದ್ದಾದ ಸಹಿ
ಹಾಕಿ ಕಳಿಸಿ.
ಧನ್ಯವಾದಗಳು

ಚಂದಿನ | Chandrashekar said...

ಜ್ಯೋತಿಯವರೆ,

ಸಾಲುಗಳು ಸರಳವಾಗಿದ್ದಂತೆ ತೋರಿದರೂ...ಅರ್ಥಪೂರ್ಣವಾಗಿವೆ.

VeenaSuresh said...

ತುಂಬಾ ಚೆನ್ನಾಗಿದೆ ನಿಮ್ಮ ಕವನ...