Wednesday 20 April, 2011

ಮದುವೆಗೆ ಎಲ್ಲರೂ ಬನ್ನಿ...



ನನ್ನ ಪ್ರೀತಿಯ ...........

    ನೆನ್ನೆ 'Bhagban' ನೋಡುತ್ತಿದ್ದೆ. ಅಮಿತಾಬ್ - ಹೇಮಾಮಾಲಿನಿ ಪ್ರೀತಿ ನೋಡಿ ಕಣ್ಣು ತುಂಬಿ ತುಂಬಿ ಬರ್ತಾ ಇತ್ತು. ಛೇ !! ಯಾಕಾದ್ರೂ ನಾನಿಷ್ಟು emotional ಅಂತ ಅಂದ್ಕೊಂಡೆ. ಅವಾಗ ಶುರುವಾಯ್ತು, ಧಾರಾವಾಹಿಯ ತರಹ ನಮ್ಮ ಮದುವೆ, ನಮ್ಮ  ಮನೆ, ಜಗಳ, sorryಗಳ ಕನಸು... ಆಹಾ..ಎಷ್ಟು ಚೆಂದ ಅನ್ನಿಸಿತು.. ನಲವತ್ತಲ್ಲ ನಾಲ್ಕು ನೂರು ವರ್ಷವೂ ನಾನು ನಿನ್ನ ಹೆಂಡತಿಯಾಗಿ ನಿನ್ನ ತೊಳನ್ನೇ ದಿಂಬಾಗಿಸಿಕೊಂಡು ಮಲುಗುವಂತಾಗಲಿ ಅಂತ ಕಾಣದ ದೇವರಲ್ಲಿ ಮನಸ್ಸು ಬೇಡಿಕೊಂಡೇಬಿಟ್ಟಿತು. ಬೇಡಿಕೆಗಳಿಗೇನೂ ಕಮ್ಮಿ ಇಲ್ಲದಿದ್ದರೂ, ಆ ದೇವರು ನನ್ನ ಈ ಬೇಡಿಕೆಯನ್ನು ಪೂರೈಸುತ್ತಾನಂತೆ.

ಎಲ್ಲ ವಿಚಿತ್ರವಾಗಿ ತೋರುತ್ತಿದೆ. ನನ್ನದೇ ಸ್ವಂತ ಗೆಳೆಯ ನನಗೆ ತಾಳಿ ಕಟ್ಟುತ್ತಾನೆ ಅಂದರೆ ನಂಬಲಿಕ್ಕೇ ಆಗುತ್ತಿಲ್ಲ.. ಗೆಳೆಯ ಗಂಡನಾಗಿ ಬದಲಾಗುವ ನಡುವೆ ಸುಮಾರು ಸಮಯ ಸಿಕ್ಕಿತ್ತು ನನಗೆ ಅದನ್ನು ಅರಗಿಸಿಕೊಳ್ಳಲು. ಆದರೂ ಈ ಖುಷಿಯನ್ನು ಅರಗಿಸಿಕೊಳ್ಳಳಾಗುತ್ತಿಲ್ಲ. ನಿನ್ನನ್ನ ಎಲ್ಲರೂ 'ನಿಮ್ಮೆಜಮಾನ್ರು' ಅಂತೆಲ್ಲ ಸಂಭೋದಿಸುತ್ತಾರೆ ನನ್ನೊಡನೆ ಮಾತಾಡುವಾಗ.ನನಗೆ ಅದನ್ನು ಕೇಳಿಸಿಕೊಂಡಾಗೆಲ್ಲ ಖುಷಿ ಧುಮ್ಮಿಕ್ಕಿದಂತೆ ಒಮ್ಮೆಲೇ ಪುಳಕ.. ಗೊತ್ತಾ? ಈಗ ನಾನು ಎಲ್ಲದಕ್ಕೂ ಅಮ್ಮನ ಅಥವಾ ಅಪ್ಪನ ಒಪ್ಪಿಗೆಗಿಂತ ನಿನ್ನ ಒಪ್ಪಿಗೆ ಕೇಳುವುದೇ ಮುಖ್ಯವಂತೆ. ಹಾಗಂತ ಅಮ್ಮನೇ ಹೇಳುವಾಗ ನನಗೆಷ್ಟು ಖುಷಿ ಆಯಿತು. ಮಗುವೊಂದು ಮಣ್ಣಿನಲ್ಲಿ ಆಟ ಆಡ  ಬಯಸಿ ಅಮ್ಮನನ್ನು ಕೇಳಲು ಹೋದಾಗ, ಅಮ್ಮ ನಿನ್ನ ಜೊತೆ ಆಡುವ ಗೆಳತಿಯನ್ನೇ ಕೇಳು 'ಆಡಲಾ?' ಎಂದು, ಎಂದು ಹೇಳಿದರೆ ಆ ಮಗುವಿಗೆ ಎಷ್ಟು ಖುಷಿಯಾಗಬಹುದೋ ಅಷ್ಟೇ ಖುಷಿ ನನಗೂ ಆಯಿತು.

ಎಲ್ಲರಿಗೂ ಹೀಗೆ ಆಗಬಹುದೇನೋ, ಏನೋ ಅವರ್ಣನೀಯ ಆನಂದ. ಪ್ರತಿ ದಿನವೂ ೨ ಸಲ ೩ ಸಲ ಎಣಿಸಿದರೂ  ಬೇಗ ಮೇ ೧೧ ಬರುತ್ತಿಲ್ಲ ಎನಿಸುತ್ತಿದೆ. ಇಷ್ಟು ದಿನ ವರ್ಷಗಳು ಕೂಡ ತುಂಬಾ ಬೇಗ ಓಡುತ್ತಿದ್ದವು. ಈಗ ಹಾಗಲ್ಲ..!!!
ಜಗತ್ತೆಲ್ಲ ಪ್ರೀತಿಯಿಂದ, ಸಂಗೀತದಿಂದ ತುಂಬಿ ಹೋದಂತೆ..ಹಗಲು ಕನಸುಗಳೆಲ್ಲ ಇನ್ನಷ್ಟು ಸುಂದರವಾದಂತೆ.. ಆದರೆ ರಾತ್ರಿ ಕನಸುಗಳು ಬೀಳುತ್ತಿಲ್ಲ. ಕನಸು ಬೀಳಲು ನಿದ್ದೆಯೇ ಬರುತ್ತಿಲ್ಲ.. ರಾತ್ರಿಯೆಲ್ಲಾ ನಿನ್ನ ಜೊತೆ ಮಾತನಾಡುತ್ತಾ ಇರಬಹುದಿತ್ತು ಅನ್ನಿಸುತ್ತಿದೆ. ಅನುಭವಿಗಳೆಲ್ಲ ಹೇಳತೊಡಗಿದ್ದಾರೆ, 'ಮೊದಮೊದಲೆಲ್ಲ ಚೆನ್ನಾಗಿರುತ್ತೆ, ಆಮೇಲೆ ನಿಂಗೆ ಗೊತ್ತಾಗುತ್ತೆ ಜೀವನ ಅಂದರೇನು ಅಂತ' ಎಂದು. 'ಇನ್ನು ಗಂಭೀರವಾಗು' ಎಂಬ ಅರ್ಥದಲ್ಲಿ ಅವರೆಲ್ಲ ಹೇಳಿದರೂ, ಅದೆಲ್ಲ ನನಗೆ ಅರ್ಥವಾಗುವಷ್ಟು ದಿನ ಖುಷಿಪಡುವ, ಕುಣಿಯುವ ಅವಕಾಶವಿದೆ ಎಂದು ಹೇಳುತ್ತಿದ್ದಾರೆ ಎಂದು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಮತ್ತೆ ಕನಸು ಕಾಣಲು ಶುರು ಮಾಡುತ್ತೇನೆ.

ಸ್ವಲ್ಪ ಭಯವೂ ಇದೆ ನನಗೆ. ಎರಡು ಕುಟುಂಬಗಳ ಮಧ್ಯೆ ಸೇತುವೆಯಾಗುವ, ಯಾರಿಗೂ ನೋವಾಗದಂತೆ ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು ನಡೆದುಕೊಳ್ಳುವ ಕೆಲಸ ಕೊಂಚ ಕಷ್ಟವೇ ಎಂಬುದು ನಿಶ್ಚಿತಾರ್ಥವಾದಾಗಿನಿಂದ ಅರ್ಥವಾಗುತ್ತಿದೆ. ಆದರೂ ನಾನು ಎಲ್ಲವನ್ನೂ ನಿಭಾಯಿಸಬಲ್ಲೆ, ಜೊತೆಗೆ ನೀನಿದ್ದೀಯಲ್ಲ ಎಂಬ ಭಂಡ ಧೈರ್ಯವಿದೆ. ಆದರೆ ಸಂಬಂಧಗಳ ಎಳೆ ಸೂಕ್ಷ್ಮ ಎಂಬುದಂತೂ ಸತ್ಯ.

ಎಲ್ಲರೂ ಆಂಟಿ ಆಂಟಿ ಎಂದು ಅಣಕಿಸುವಾಗ, ನಾನೂ ಹೆಚ್ಚಿನ ಆಂಟಿಯರಂತೆ ಡುಮ್ಮು ಹೊಟ್ಟೆಯ ಆಂಟಿಯಾಗಿ, ಅಡಿಗೆ ಮನೆಯಲ್ಲಿ ಕೈ ಒರೆಸಿ ಒರೆಸಿ ಕೊಳಕಾದರೂ ಅದೇ ನೈಟಿ ಹಾಕಿಕೊಂಡು ಮಕ್ಕಳೊಂದಿಗೆ, ಗಂಡನೊಂದಿಗೆ ಕಿರುಚುತ್ತ, ಜಗಳವಾಡುತ್ತಾ, ದುಡಿದು ಹೈರಾಣಾಗಿ, ಜಗತ್ತಿನ ಯಾವ ಸೌಂದರ್ಯವೂ ಕಣ್ಣಿಗೆ ಕಾಣದಂತಾಗಿ, ಮುಂದೊಂದು ದಿನ ಯಾಕೋ ಎಲ್ಲರೂ ನನ್ನನ್ನು ದುಡಿಯುವ ಯಂತ್ರದಂತೆ ನೋಡುತ್ತಿದ್ದಾರೆ ಎಂದುಕೊಂಡು ಅತ್ತು ಕರೆದು, ಕೊನೆಗೆ ಖಿನ್ನಳಾಗಿ....... ಅಬ್ಬ..!! ನಿಜಕ್ಕ್ಕೂ ಸ್ವಲ್ಪ ಜಾಸ್ತಿಯೇ ಭಯವಾಗುತ್ತೆ. ಆದರೂ ನನ್ನ ಜೊತೆ ನೀನಿದ್ದಿಯಲ್ಲ..ನೀನಲ್ಲದೆ ಬೇರೆ ಯಾರೋ ಆಗಿದ್ದರೆ ಅವರನ್ನು ಅರ್ಥ ಮಾಡಿಕೊಳ್ಳುವ, ಅರ್ಥವಾಗದಿರುವ... ಇನ್ನೂ ಏನೇನೋ ಸಮಸ್ಯೆಗಳೂ ಇರುತ್ತಿದ್ದವೇನೋ...

ಜೀವನಪೂರ್ತಿ ಜೊತೆಗಿರುವ ಗೆಳೆಯನಿಗೆ ಕೋಟಿ ವಂದನೆಗಳು...

20 comments:

ವಾಣಿಶ್ರೀ ಭಟ್ said...

All the best and wish you happy married Life

ಸಾಗರದಾಚೆಯ ಇಂಚರ said...

Jyothi,

hosa suddige shubhaashayagalu

abhinandanegalu kooda

Jyoti Hebbar said...

@Vanishree & @Guru..
Thank u so much..

ವಿ.ರಾ.ಹೆ. said...

ಜ್ಯೋತಿ,

ತುಂಬಾ ಚೆನ್ನಾಗಿ ಆಪ್ತವಾಗಿ ಬರೆದಿದ್ದೀರಿ.

ಹೊಸಜೀವನಕ್ಕೆ ಶುಭಾಶಯಗಳು.

ಆಲ್ ದಿ ಬೆಸ್ಟ್ :)

ದಿನಕರ ಮೊಗೇರ said...

wish you all best in life....
be happppppy.............

Soumya. Bhagwat said...

All the very best Jyothi :) Wish you happy married life :))

ಕನಸು ಕಂಗಳ ಹುಡುಗ said...

'ಆಂಟಿ' ಬಗ್ಗೆ ನಿನ್ನ ಕಲ್ಪನೆ ಚಂದಿದ್ದು..

all d best jyoti.........

ಚಂದಾ ಮಾಡಿ ಮದುವೆಗೆ ಕರದ್ಯೇ.........

'ವಿನಾಯಕಾ' ನೀನೊಂದಿದ್ದರೆ ಎಲ್ಲವು ಸುಲಲಿತ.....

ಮನಸಿನಮನೆಯವನು said...

Shubhaashayagalu..
Shubhavaagali..

Jyoti Hebbar said...

@ V.Ra.He, @ Dinakar, @ Soumya, @ kanasu kangala huduga, @ Vichalita

ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು.

ಆನಂದ said...

Congrats and all the best :)

Jyoti Hebbar said...

Thank you Anand

Sandhya said...

Well written...wish you a wonderfully happy married life :)

ತೇಜಸ್ವಿನಿ ಹೆಗಡೆ said...

Touchy & nice. Good Luck & Congrats :)

ಗಿರೀಶ್.ಎಸ್ said...

Happy married life....

Ittigecement said...

ಜ್ಯೋತಿ...

ಅಭಿನಂದನೆಗಳು...

ನಾಳಿನ ಬಗೆಗೆ ಕಲ್ಪನೆ ಏನೇ ಇದ್ದರೂ...
ಕಷ್ಟಗಳ ಅರಿವಿದ್ದರೂ..
ನಂಬಿದ ಗೆಳೆಯನ ಭರವಸೆ ಇದ್ದರೆ ಸಾಕೆನ್ನುವ ನಿಮ್ಮ ಮಾತುಗಳಲ್ಲಿ ...
ನಾಳೆಗಳನ್ನು ಸಮರ್ಥವಾಗಿ ಎದುರಿಸುವ..
ಮುನ್ನಡೆವ..
ಜವಾಬ್ದಾರಿ ಹೊರುವ ಭರವಸೆ ಇದೆ... ಕಾಣುತ್ತಿದೆ...

ನಿಮ್ಮಿಬ್ಬರ ಆಸೆ.. ಕನಸುಗಳು ನನಸಾಗಲಿ..

ಶುಭಾಶಯಗಳು.. ಆಶೀರ್ವಾದಗಳು..

ಪ್ರಕಾಶಣ್ಣ/ ಆಶಾ..

ಅವಿನಾಶ್ ಅಗ್ನಿಹೋತ್ರಿ said...

ಜ್ಯೋತಿ, ನಿಮ್ಮ ಹೊಸಜೀವನಕ್ಕೆ ಶುಭಾಶಯಗಳು, ಮದುವೆಗೆ Invite ಮಾಡಿರೋ ಈ style'ಗೆ hats off...!!
late ಆದ್ರೂ ನನ್ನ ಕಡೆ'ಇಂದ latest wishes..!!

Jyoti Hebbar said...

Thank you...

KalavathiMadhusudan said...

nimma anubhavagalannu sogasaagi bidisittiddira.samarasave jivana.wish you happy married life.

vandana shigehalli said...

Congrats & wish you happy married Life

vandana shigehalli said...

Congrats..

vandana & praveen shigehalli