Sunday 5 August, 2012

ಮೌನ ಉಳಿಯಿತು ಕವಿತೆಯಲ್ಲಿ...













ಆಹಾ! ಕಡಲ ತೀರದಲ್ಲಿ
ಜೊತೆಯಾಗಿ ಕುಳಿತಾಗ
ಮೌನ ಮಾತಾಡಿತು,
ನಿನ್ನ ಕೈಯ ಬಿಸುಪು
ಜಗವ ಮರೆಸಿತು
ಎಂಬುದೆಲ್ಲ ಕವಿತೆಯಲ್ಲಿನ
ಸಾಲಾಗಿ ಉಳಿಯಲಷ್ಟೇ

ಕಡಲ ತೀರವೋ,
ಹಸಿರು ಬೆಟ್ಟವೋ,
ವ್ಯತ್ಯಾಸವೇನಿಲ್ಲ
ಮೌನ ಮಾತನಾಡುವುದಿಲ್ಲ

ಕಂಡಕಂಡವರ ಬಗೆಗೆಲ್ಲ ಮಾತಾಡಿ
ಅವರಿವರ ವಿವರಗಳ ಹಂಚಿಕೊಂಡು
ಮುಂದಿನ ಸುಖಗಳ ಕನಸು ಕಂಡು
ಇರುವ ದುಃಖಕ್ಕೆ ಮತ್ತಷ್ಟು ಸೇರಿಸಿ
ಪರಸ್ಪರ ಕರುಣೆಯನ್ನು ಬೇಡಿ,
ಇಬ್ಬರೂ ಭಿಕ್ಷುಕರು......
ಅಬ್ಬಾ! ಮನಸು ಹಗುರಾಯಿತು ಎನುವಾಗ,

ಮೌನಕ್ಕೆ ಜಾಗವೆಲ್ಲಿ?
ಉಳಿಯಲೇಬೇಕು ಅದು ಕವಿತೆಯಲ್ಲಿ......

7 comments:

Badarinath Palavalli said...

ತೆರೆದ ಮನಸ್ಸುಗಳ ಭಾವ ಸಂವಾದ ಇಷ್ಟವಾಯಿತು.

SANTA said...

ಕವನ ಚೆನ್ನಾಗಿದೆ. ವಿಷಾದಯೋಗವೇಕೆ? ಮೌನ ಕವಿತೆಯಲ್ಲಿ ಮಾತಾಗಿ ಅರಳಿದರೆ ಇನ್ನಷ್ಟು ಚೆಂದವಲ್ಲವೇ? ಕೈಯಬಿಸುಪು ಜಗವ ಮರೆಸುವುದು ಆರಂಭ ಮತ್ತು ಅಂತ್ಯಗಳಲ್ಲಿ! ನಡುಗಾಲದಲ್ಲಿ ಅದು ಬಿಸಿ ಹುಟ್ಟಿಸುತ್ತದೆ! ಕವಿತೆ ವಸುಂಧರೆ! ಎಲ್ಲವನ್ನೂ ದಕ್ಕಿಸಿಕೊಳ್ಳುವ ಧಾರ್ಷ್ಟ್ಯ ಅದಕ್ಕಿದೆ. ಬರೆದು ಹಗುರಾಗುತ್ತಿರಿ!

Raghunandan K Hegde said...

ಮಾತುಗಳಿಲ್ಲದೆಡೆಯಲ್ಲಿ ಮೌನವೇ ಉಳೀದೀತು
ಉಳಿದ ಮೌನದ ಮಾತು ಕೇಳೀತು ಮಳೆಯ ಹಾಡಿನಲ್ಲಿ

ಕವನದ ಸಾಲುಗಳಲ್ಲಿ ಮೌನ ಕಾಡಿತು
ಮಾತು ಮರೆಯಿತು

ತುಂಬಾ ದಿನಗಳ ನಂತರ ಅಕ್ಷರದಾಗಸದಿಂದ ಭಾವಗಳ ಮಳೆ ಸುರಿದಂತಿದೆ, ತುಂಬಿ ಹರಿಯಲಿ ಸದಾ..

ರಶ್ಮಿ said...

Very Nice....

ಕನಸು ಕಂಗಳ ಹುಡುಗ said...

ಮೌನದಲ್ಲೇ ಪ್ರಪಂಚದ ನಿಗೂಢತೆ ತೆರೆದುಕೊಳ್ಳೋದು...

ಭಾವ ಸಮುದ್ರ ಉಕ್ಕಿ ಹರಿಯೋದೂ ಮೌನದಲ್ಲೇ...

ಮೌನಕ್ಕೊಂದು ಸೊಗಸಿದೆ.....

ಮೌನದಲ್ಲೇ ಮಾತಾಗಬೇಕಿದ್ದ ಸಾಲುಗಳು ಕವಿತೆಗಳಾಗೋದು....

ಒಳ್ಳೆಯ ಸಾಲುಗಳು...

ಹೆಜ್ಜೆ ಗುರುತು ಉಳಿದುಬಿಡಲಿ.......

KalavathiMadhusudan said...

chendada kavite....

Unknown said...

ಮೌನವನ್ನು ಕವಿತೆಯಲ್ಲಿ ವರ್ಣಿಸಿದ್ದು ತುಂಬಾ ಸುಂದರವಾಗಿದೆ.