Monday 21 December, 2009

ಇನ್ನಾದರೂ....



ನಾವಿಕನಂತೆ ನೀನಿರಲು
ನಿನ್ನೆದೆಯ ನೌಕೆಯಲಿ
ನನ್ನುಸಿರ ಪಯಣ
ಬಾರದೆಯೆ ಇರಲೆನ್ನ ನಿಲ್ದಾಣ

ಪಯಣಿಗಳು ನಾನೆಂದು ತಿಳಿದು
ಇಳಿಯೆನ್ನದಿರು ನನ್ನ
ನಿರ್ಜೀವ ನೌಕೆಯಾಗಿಯಾಗಿಯಾದರೂ
ಬಳಿಯಿರುವೆನು.

ಕಣ್ಣೆದುರು ನಾನಿರಲು
ಕಣ್ಣು ಮುಚ್ಚಿ ಮರೆಯಬಹುದು ನೀನು
ಅದೃಶ್ಯವಾಗುವ ದೃಶ್ಯವಾಗಲಾರೆ ನಾನು
ರೆಪ್ಪೆಯೊಳಗಿನ ಕತ್ತಲಾದರೂ ಆಗಿ
ಜೊತೆಗಿರುವೆನು.

ಕಡಲಂತೆ ನೀನಿರಲು
ಬಳಿ ಬಾ ಎನಲಾರೆನು
ನದಿಯಾಗಿ ಹರಿದಿಹೆನು
ಇನ್ನಾದರೂ ಬಂದು ನಿನ್ನ ಸೇರಲೇನು?



5 comments:

ಗೌತಮ್ ಹೆಗಡೆ said...

mast kavana.maate illa:)

ಸಾಗರದಾಚೆಯ ಇಂಚರ said...

ಜ್ಯೋತಿ
ತುಂಬಾ ಚೆನದದ್ ಕವನ
ಭಾವನೆಗಳು ತುಂಬಾ ಚೆನ್ನಾಗಿ ವ್ಯಕ್ತವಾಗಿವೆ

ಆನಂದ said...

ಪ್ರೀತಿ, ಅಲೆ ಅಲೆಯಾಗಿ ಹರಿದು ಕವನವಾಗಿದೆ :)

Jyoti Hebbar said...

ನಿಮಗೆಲ್ಲರಿಗೂ ತುಂಬಾ ತುಂಬಾ thanks ನಂಗೆ ಅದು ಚೆನ್ನಾಗಿದೆ ಅಂತ ಗೊತ್ತಾಗೋದೇ ನೀವು comment ಬರೆದಾದ ಮೇಲೆ...ಮತ್ತೆ ಬರೀಬೇಕು ಅಂತ ಅನ್ನಿಸೋದೇ ಆವಾಗ...thank u so much for reading and writing comments..

ಮುಸ್ಸ೦ಜೆ said...

ತು೦ಬಾ ಚ೦ದದ ಕವನ.... ನಿನ್ನಾಸೆಯ ಸಾಗರ ಸೇರಲು ಆದಷ್ಟು ಬೇಗ Green Signal ಸಿಗಲಿ :)